Here’s the 27th installment of ‘Hosa Kanasu’, my fortnightly column in Prajavani: 06 Mar 2012
– Balu
A development activist, public policy advocate, social innovator and leadership trainer
Here’s the 58th installment of ‘Hosa Kanasu’, my fortnightly column in Prajavani: 04 Jun 2013 Writing a column can be very engaging and absorbing. I have enjoyed writing the ‘Hosa Kanasu’ column for Prajavani. Every alternate Tuesday, i would get phone calls and emails appreciating my articles and sometimes criticizing them. I found the readers of Prajavani very engaged. I began to be known more as a Prajavani columnist than as the founder of SVYM. But over the years, i started finding that i was feeling the pressure of meeting deadlines and saw my creative energies waning. The joy of
This site uses Akismet to reduce spam. Learn how your comment data is processed.
ಪ್ರಿಯರೆ,
ನಮಸ್ಕಾರ.
ಡಾ. ಆರ್.ಬಾಲಸುಬ್ರಮಣ್ಯಂ ಅವರ ‘ಹೊಸ ಕನಸು’ ಅಂಕಣದ ಲೇಖನ ‘ಬಜೆಟ್ ಸಿದ್ಧಪಡಿಸುತ್ತಿರುವ ಮುಖ್ಯಮಂತ್ರಿಗಳ ಅವಗಾಹನೆಗಾಗಿ…’ ಸಕಾಲಿಕವಾಗಿದೆ. ಬಜೆಟ್ ಹಿಂದಿನ ಚರ್ಚೆಯನ್ನು ವಿವರಿಸಿರುವ ಲೇಖಕರು ಇಂದಿನ ಅಗತ್ಯಗಳು ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಆಗಬೇಕಿರುವ ಚಿಂತನೆಗಳನ್ನು ಸಮರ್ಥವಾಗಿ ವಿವರಿಸಿದ್ದಾರೆ. ಅಭಿನಂದನೆಗಳು.
ಜಿಲ್ಲಾ ಮಟ್ಟದ ಯೋಜನೆಗಳಿಗೆ ಅರ್ಥಬರಬೇಕೆಂದರೆ, ತಳಮಟ್ಟದ ಆವಶ್ಯಕತೆಗಳನ್ನು ವರ್ಷದ ಆರಂಭದಿಂದಲೇ ಗಮನಕ್ಕೆ ತೆಗೆದುಕೊಳ್ಳುವುದು ಅತ್ಯಾವಶ್ಯಕ. ಇತ್ತೀಚಿಗೆ ನಾವು ನಡೆಸಿರುವ ಆಯವ್ಯಯದ ಅವಲೋಕನದಲ್ಲಿ ಕಂಡುಬಂದಿರುವುದು (ಮತ್ತೆ ಮತ್ತೆ ಅದೇ ವಿಚಾರ ಕಾಣುತ್ತಿರುವುದು) ಹಿಂದಿನ ವರ್ಷಗಳಲ್ಲಿ ಯೋಜನೆಗಳಿಗೆ ಮೀಸಲಿಟ್ಟ ಹಣದಲ್ಲಿ (ಅಥವಾ ಬಜೆಟ್ನಲ್ಲಿ ಘೋಷಿಸಿದ ಹಣದಲ್ಲಿ) ಬಹುಪಾಲು ಬಳಕೆಯೇ ಆಗದಿರುವುದು. ಅಥವಾ ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಹಣ ಬರದೇ ಇರುವುದು. ಕೆಲವು ಪ್ರಮುಖ ಕ್ಷೇತ್ರೆಗಳಲ್ಲಿ ಹೀಗೆ ಆದರೆ, ಉದಾಹರಣೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜಕಲ್ಯಾಣ; ಬಜೆಟ್ನಲ್ಲಿ ಕೋಟಿಗಟ್ಟಲೆ ಹಣ ಮೀಸಲಿದೆ ಎಂದು ಘೋಷಿಸಿಕೊಳ್ಳುವುದರಲ್ಲಿ ಅರ್ಥವೇ ಇರುವುದಿಲ್ಲ.
ಅಧಿಕಾರಿಗಳೊಡನೆ ಈ ಕುರಿತು ಮಾತನಾಡಿದರೆ ತಿಳಿಯುವುದು ಇದರ ಇನ್ನೊಂದು ಮಗ್ಗಲು. ಈಗ ಮಾರ್ಚ್. ಸರ್ಕಾರದ ಅನುದಾನದಿಂದ ನಡೆಯಬೇಕಿರುವ ಎಷ್ಟೋ ಯೋಜನೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಿತರಿಂದ (ಪ್ರಮುಖವಾಗಿ ಸ್ವಯಂಸೇವಾ ಸಂಘಟನೆಗಳಿಂದ) ಹಣ ಬಳಕೆ ಪ್ರಮಾಣಪತ್ರೆ (ಯುಟಿಲೈಸೇಷನ್ ಸರ್ಟಿಫಿಕೇಟ್) ಗಾಗಿ ಕಾಡುತ್ತಿರುತ್ತಾರೆ. ಹಣ ನೀಡದೆಯೇ ಕಾರ್ಯಕ್ರಮ ಆಗಿದೆ ಎಂಬ ವರದಿ, ಹಣಬಳಕೆಯ ಲೆಕ್ಕ ಪತ್ರ ನೀಡಬೇಕು. ಆ ನಂತರ ಹಣ ಮಾರ್ಚ್ ಮುಗಿಯುವುದರೊಳಗೆ ಮಾಯಾಮಂತ್ರದಂತೆ ಬರುತ್ತದೆ! ಒಂದು ಬಹಿರಂಗ ಗುಟ್ಟು,, ಎಷ್ಟೋ ಸ್ವಯಂಸೇವಾ ಸಂಘಟನೆಗಳು ಕಾರ್ಯಕ್ರಮಗಳನ್ನೇ ಮಾಡಿರುವುದಿಲ್ಲ, ಆದರೆ ಲೆಕ್ಕ ಮತ್ತು ವರದಿ ಕೊಡುತ್ತಾರೆ. (ಅದರ ಹಿಂದಿನ ಭ್ರಷ್ಟಾಚಾರದ ಆಟಗಳನ್ನು ಬಲ್ಲವರೇ ಬಲ್ಲರು). ಸರ್ಕಾರದ ಕಾರ್ಯಕ್ರಮಗಳಲ್ಲೂ ಹೀಗೆಯೇ ಅಗಿರಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ನೂರಾರು ಯೋಜನೆಗಳು ಕಾರ್ಯಾನುಷ್ಠಾನಕ್ಕೆ ಬರದೆಯೇ ಸಂಬಂಧಿತರಿಗೆ ತಲುಪದೆಯೇ ಮುಂದೆ ಹೋಗುತ್ತಿದೆ.
ಈ ಮೇಲಿನ ವಿಚಾರವನ್ನು ಈಗಿರುವ ಸರ್ಕಾರದ ಲೋಪ ಮಾತ್ರ ಎನ್ನಲು ಆಗುವುದಿಲ್ಲ. ಇಂತಹ ಕರ್ತವ್ಯ ಲೋಪ ಅಥವಾ ಬೇಜವಾಬ್ದಾರಿಯುತ ಯೋಜನೆಯನ್ನು ನಮ್ಮ ಅಧಿಕಾರಶಾಹಿ ಹಾಗು ಆಡಳಿತ ವರ್ಗ ವರ್ಷಾನುವರ್ಷಗಳಿಂದ ನಡೆಸಿಕೊಂಡು ಬಂದಿದೆ. ಬಜೆಟ್ ಹೀಗಾಗಿ ಸುಮ್ಮನೆ ಒಂದು ಕಾಟಾಚಾರದ ವಾರ್ಷಿಕ ಕಾರ್ಯಕ್ರಮದಂತಾಗುತ್ತಿದೆ. ಮುಂದಿನ ದಿನಗಳಲ್ಲಾದರೂ, ವಾರ್ಷಿಕ ಬಜೆಟ್ನಲ್ಲಿ ಹಣದ ಮೀಸಲು ಎಂದರೆ, ಅದರ ನಿರ್ವಹಣೆಯೂ ಏಪ್ರಿಲ್ ತಿಂಗಳಿಂದಲೇ ಆಗುವಂತೆ ವ್ಯವಸ್ಥೆ ಮಾಡಲಿ. ಮಾರ್ಚ್ ನಲ್ಲಿ ಬಜೆಟ್. ಜೂನ್ನಲ್ಲಿ ಬೇಡಿಕೆ ಸಲ್ಲಿಕೆ, ಸೆಪ್ಟಂಬರ್ ನಲ್ಲಿ ಫಲಾನುಭವಿಗಳ ಹುಡುಕಾಟ/ಗುರುತಿಸುವಿಕೆ, ಜನವರಿಯಲ್ಲಿ ಕಾರ್ಯಕ್ರಮ ನಿರ್ವಹಣೆಗೆ ಪತ್ರ, ಮಾರ್ಚ್ನಲ್ಲಿ ಹಣ ಬಿಡುಗಡೆ ಎಂದರೆ ಯಾವ ಯೋಜನೆತಾನೆ ಫಲ ಕಂಡೀತು. ಸರ್ಕಾರದ ಯೋಜನಾಕಾರರು ಈ ಕುರಿತು ಪ್ರತಿಕ್ರಿಯೆ ನೀಡುವರೇನು? ನಮ್ಮ ಯೋಜನೆಗಳ (ಅಂದರೆ ಹಣ ಬಿಡುಗಡೆಯ) ಆವರ್ತಗಳನ್ನು ಬದಲಿಸಬಲ್ಲರೇನು?
ವಾಸುದೇವ ಶರ್ಮಾ